ಪಡ್ಡಾಯಿ ೨೦೧೮ರಲ್ಲಿ ತೆರೆಕಂಡ ಒಂದು ತುಳು ಚಲನಚಿತ್ರ. ನಿರ್ದೇಶಕ ಅಭಯಸಿಂಹರ ಚೊಚ್ಚಲ ತುಳು ಚಲನಚಿತ್ರ ಇದಾಗಿದೆ. == ಪಾತ್ರ ವರ್ಗ == ಈ ಚಲನಚಿತ್ರದಲ್ಲಿ ಮೋಹನ್ ಶೇಣಿ, ಬಿಂದು ರಕ್ಷಿಧಿ, ಚಂದ್ರಹಾಸ ಉಳ್ಳಾಲ, ಗೋಪಿನಾಥ್ ಭಟ್, ಅವಿನಾಶ್ ರೈ, ಸದಾಶಿವ ನಿನಾಸಂ, ಶ್ರೀನಿಧಿ ಆಚಾರ್, ಪ್ರಭಾಕರ ಕಾಪಿಕಾಡ್, ವಾಣಿ ಪೆರಿಯೋಡಿ, ರವಿ ಭಟ್, ಮಲ್ಲಿಕಾ ಜ್ಯೋತಿಗುಡ್ಡೆ, ಸಂತೋಷ್ ಶೆಟ್ಟಿ ಮತ್ತಿತರು ನಟಿಸಿದ್ದಾರೆ. == ಕಥಾ ತಿರುಳು == ಯಕ್ಷಗಾನ, ಭೂತಾರಾಧನೆಗೆ ಒತ್ತು ನೀಡಿ ಕಡಲ ಮಧ್ಯದಲ್ಲೂ ಕೆಲವು ದೃಶ್ಯಗಳನ್ನು ಸೆರೆಹಿಡಿದಿದೆ ಪಡ್ಡಾಯಿ ಚಿತ್ರ. ಮುಖಂಡರೊಬ್ಬರ ಮನೆಯಲ್ಲಿನ ಕೆಲಸದಾಳು ದನಿಯ, ತನ್ನ ಪತ್ನಿಯ ಮೂಲಕ ಹೇಗೆ ಬದಲಾಗುತ್ತಾನೆ ಮತ್ತು ಸಮಾಜ ಈ ಬೆಳವಣಿಗೆಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುದೇ ಕಥಾ ಹಂದರ. "ಅತಿ ಆಸೆ ಗತಿ ಕೇಡು" ಎಂಬ ನೀತಿ ಇದರಲ್ಲಿದೆ. ಷೇಕ್ಸ್ ಪಿಯರ್ ನ ಮ್ಯಾಕ್ ಬೆತ್ ನಾಟಕದ ಸ್ಪೂರ್ತಿಯಿಂದಾಗಿ ಮಾಡಿದ ಕರಾವಳಿಯ ಮೊಗವೀರರ ಬದುಕನ್ನು ತೋರಿಸುವ ಚಿತ್ರ ಇದಾಗಿದೆ. == ಚಿತ್ರ ತಂಡ == ನಿರ್ದೇಶಕ : ಅಭಯ ಸಿಂಹ, ಮಂಗಳೂರು ನಿರ್ಮಾಪಕ : ನಿತ್ಯಾನಂದ ಪೈ, ಕಾರ್ಕಳ ಸಂಗೀತ : ಮಣಿಕಾಂತ್ ಕದ್ರಿ ಸಂಕಲನ : ಪ್ರಶಾಂತ್ ಛಾಯಾಗ್ರಹಣ : ವಿಷ್ಣುಪ್ರಸಾದ್, ಪುತ್ತೂರು ಚಿತ್ರಕಥೆ : ಪ್ರಕಾಶ್ ಪಂಡಿತ್ ಚಿತ್ರ ಬಿಡುಗಡೆಯಾದ ವರ್ಷ : ೨೦೧೮ ಭಾಷೆ : ತುಳು == ಪದದ ಅರ್ಥ == ತುಳುವಿನ ಪಡ್ಡಾಯಿ ಅಂದರೆ ಕನ್ನಡದ ಪಶ್ಚಿಮ ದಿಕ್ಕು ಎಂದರ್ಥ. ತುಳುನಾಡಿನ ಮೊಗವೀರರು ಕಡಲನ್ನು ಪಡ್ಡಾಯಿ ಎಂದೂ ಕರೆಯುವ ಕ್ರಮವಿದೆ. == ಪ್ರಶಸ್ತಿ == ೬೫ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡ್ಡಾಯಿ - ತುಳು ಚಲನಚಿತ್ರಕ್ಕೆ ದೊರಕಿದೆ. == ರಾಷ್ಟ್ರೀಯ ಪ್ರಶಸ್ತಿ ಪಡೆದ ಇತರೆ ತುಳು ಚಿತ್ರಗಳು == ಬಂಗಾರ್ ಪಟ್ಲೇರ್ (೧೯೯೩) ಕೋಟಿ ಚೆನ್ನಯ (೨೦೦೭) ಗಗ್ಗರ (೨೦೧೦) ಮದಿಪು (೨೦೧೭) == ಉಲ್ಲೇಖಗಳು ==